Monday, 28 January 2019

ಬಾ ಬೆಳಕೇ ನನ್ನೊಳಗೂ
ಅಂಧಕಾರ ತುಂಬಿಹುದು
ಹೊಸ ಬೆಳಕಾಗಿ ಬಾ
ಹೊಸ ಹುರುಪಾಗಿ ಬಾ
ಬಾ ಒಲವೇ ನನ್ನೊಳಗೂ
ಬರಡು ಜೀವನವಾಗಿಹುದು
ಹೊಸ ನೆನಪಾಗಿ ಬಾ
ಹೊಸ ಕನಸಾಗಿ ಬಾ
ಬಾ ಚೇತನ ನನ್ನೊಳಗೂ
ನಿಶಕ್ತಿ ತುಂಬಿಹುದು
ಹೊಸ ಜೀವಸತ್ವವಾಗಿ ಬಾ
ಹೊಸ ಲೋಹ ತುಂಬು ಬಾ
ಬಾ ಮಳೆಯೆ ಚಿಟಪಟಿಸು
ಬಿರುಕು ಬಿಟ್ಟಿದೆ ಮನಸ್ಸು
ಹೊಸ ನೀರಾಗಿ ಬಾ
ಹೊಸ ಮೊಳಕೆಯೊಂದನ್ನು ತಾ
ಬರೀ ಬ್ರಹ್ಮ ಹೊಸ ಹಣೆಬರಹವಾ
ಎಲ್ಲೋ ಮಸಿ ಅಚ್ಚಿ ಅಳಿಸಿರುವೆ
ಹೊಸ ಅಕ್ಷರವಾಗಿ ಬಾ
ಹೊಸ ಶೈಲಿಯಾಗಿ ಬಾ
ಬಾ ಸೂರ್ಯ ಉದಯಿಸು
ಇರುಳು ತುಂಬಾ ಸೋತಿಹುದು
ಹೊಸ ಕಿರಣವಾಗಿ ಬಾ
ಹೊಸ ಬದುಕನ್ನು ತಾ
ಬಾ ಸಾವೇ ಸಂಭವಿಸು
ಬದುಕು ಸುಟ್ಟು ಬೆಂದಿಹುದು
ಹೊಸ ಚಿತೆಯಾಗಿ ಬಾ
ಹೊಸ ಅಗ್ನಿಯನ್ನು ತಾ

No comments:

Post a Comment