Monday, 28 January 2019

ಅದೆಷ್ಟೋ ಆಸೆಗಳು ದಡವನ್ನು ಬಡಿಯುತ್ತಿವೆ 
ನೀನಿಲ್ಲಿ ಬಂದ ಕ್ಷಣವೇ ನಿನ್ನ ಮಡಿಲ ಸೇರಲಿವೆ,
ಕಾಮನುಬಿಲ್ಲು ಮೂಡುವ ವೇಳೆ 
ಕತ್ತಲಾವರಿಸಿಕೊಂಡ ಬಾನಿಗೆ 
ಬೆಳಕಾಗಿ ನೀ ಬರುವೆಯಾ!?
ಕವಿತೆ ಬರೆಯಲಾಗದೆ ಕಣ್ಣೀರಿನಿಂದ
ನೆನೆದ ಕಾಗದವನ್ನು ಕೈಗಿಡುವೆ,
ಭಾರದಿಂದಲೇ ಭಾವನೆಯ ಅರಿಯುವೆಯಾ?
ಭರವಸೆ ನೀಡಲಾರೆ ಹುಡುಗಿ
ಜೀವ ಇರುವವರೆಗೂ ನಿನ್ನೊಂದಿಗಿರುವೆ ಎಂದು?
ಉಯಿಲಲ್ಲಿ ಬರೆದು ಕೊಡುತ್ತೇನೆ
ನೀನಿರುವವರೆಗಷ್ಟೇ ನನ್ನೀ ಉಸಿರು ಇರುವುದೆಂದು!

No comments:

Post a Comment