Monday, 28 January 2019

ಹೆಣ್ಣು!
=-=-=-=
ಮುಂಜಾನೆಯ ಹೊತ್ತಿನಲ್ಲಿ
ಹಸು ಹೆಣ್ಣು ಕರು ಹಾಕಿದರಿಂದ
ಎಲ್ಲರಿಗೂ ಸಿಹಿ ಹಂಚಿ 
ಸಂಭ್ರಮಿಸಿದ್ದ ಮನೆಯೊಡತಿಯ 
ಮುಖದಲ್ಲಿ
ಸಂಜೆ ಸೊಸೆ ಹೆಣ್ಣು ಮಗುವಿಗೆ 
ಜನುಮ ನೀಡಿದಕ್ಕೆ!
ಸೂತಕದ ಛಾಯೆ!
ಭಾವನೆಗಳು ಸತ್ತ ಮನೆಯಲ್ಲಿ
ನವಜಾತ ಶಿಶು ಅಳುತ್ತಿತ್ತು!

No comments:

Post a Comment