Monday, 28 January 2019

ನನ್ನೆಲ್ಲಾ ಕನಸುಗಳನ್ನು 
ನಿನ್ನ ಕೈಗಿಟ್ಟು ಬಂದ ಮೇಲೀಗ
ನಿದ್ರೆಯು ಆವರಿಸುತ್ತಿಲ್ಲಾ, 
ನಿನ್ನದೊಂದು ಹಳೆಯ 
ಅಂಗಿಯ ನೀಡೀಗ ಹುಡುಗ
ದಿಂಬಿನ ಮೇಲಿಟ್ಟು ತೊಳೆಂದು ಒರಗುತ್ತೇನೆ.
ಕೈಬಳೆಯ ಸದ್ದೀಗ ಹಿಂಸೆ ಎನ್ನಿಸುತ್ತದೆ
ಹಣೆಯ ಮೇಲಿನ ಬಿಂದಿ
ನಿನ್ನಯ ಮುತ್ತಿಲ್ಲದೆ ಮಾಸಿದೆ
ಕಾಲ್ಗೆಜ್ಜೆಯ ಮಣಿಗಳನ್ನು ಕಳಚಿಟ್ಟಿದ್ದೇನೆ
ಪಾದಗಳನ್ನು ಸ್ಪರ್ಶಿಸುವಾಗ
ನಿನ್ನ ಕಿರುಬೆರಳ ನೆನಪಿಸದಿರಲೆಂದು
ಸದ್ಯಕ್ಕೀಗ ಈ ಕತ್ತಲು ವೇಗದಿ ಕರಗಲಿ
ನಾಳೆ ನಿನ್ನೊಂದಿಗೆ ಈ ಮಾತುಗಳನ್ನು
ಹೇಳಿ ಮುಗಿಸುವ ವೇಳೆ
ಎದೆಯಲೊಂದು ಜಾತ್ರೆ ಜರುಗಲಿ

No comments:

Post a Comment