Monday, 28 January 2019

ಮುತ್ತಿನ ಸರದ ದಾರವನ್ನು 
ಕಟ್ಟಲು ಬಂದವನು
ನಿನ್ನ ನೀಳ ಬೆನ್ನಿಗೆ 
ಒಂದು ಮುತ್ತಿಟ್ಟ ಮರುಕ್ಷಣವೇ,
ಹುಬ್ಬುಗಳನ್ನು ಏಕೆ 
ಮೇಲೇರಿಸಿ ನೋಡುತ್ತಿ!?
ಎದೆಯ ಮೇಲೆ ಮುತ್ತುಗಳ
ಸರವನ್ನು ಆಡಲು ಬಿಟ್ಟು,
ಬೆನ್ನನ್ನು ಬರಿದಾಗಿಡುವುದು
ಅನ್ಯಾಯ ಅಲ್ಲವೇ!?

No comments:

Post a Comment