ಅಂದು ನಿಮ್ಮ ಮನೆಯಲ್ಲಿ
ಹೆಣ್ಣು ನೋಡಲು ಬಂದಾಗ ನೀ ಕೊಟ್ಟ
ಚಹಾದಲ್ಲಿ ಸಕ್ಕರೆ ಕಡಿಮೆ ಇದ್ದಾಗಲೇ
ಅರ್ಥವಾಗಿತ್ತು ನಿನಗಿಲ್ಲ ಈಗ
ಮದುವೆ ಆಗುವ ಮೋಹ,
ಹೆತ್ತವರ ಮಾತಿಗೆ ಒಪ್ಪಿದೆ,
ನಾ ಬಿಗಿದ ಮೂರು ಗಂಟಿಗೆ ಕಟ್ಟುಬಿದ್ದೆ,
ಮಾಲೆಯ ಹೊತ್ತ ನಿನ್ನ ಕೊರಳ ಮೇಲೆ
ನಗುವಿನ ಹೂ ಅರಳದಿದ್ದಾಗಲೇ ನನಗದು ತಿಳಿಯಿತು,
ಮಡಿಲ ಮೇಲೆ ಕೂರಿಸಿಕೊಂಡೆ ಎಂದು
ನಿನ್ನನ್ನು ಒಲ್ಲದ ಮನಸಿನಲಿ ಮಂಚದ ಮೇಲೆ
ನಾನೆಂದೂ ಕೂರಿಸುವುದಿಲ್ಲಾ,
ನನ್ನ ಮುಂದೆ ನೀ ಅಳುವಾಗಲೂ
ನೀ ಒಪ್ಪಿಗೆ ನೀಡದೆ ಕಣ್ಣ ಒರಸಲು ನಾ ಮುಟ್ಟುವುದಿಲ್ಲ,
ಅವಕಾಶಗಳು ಹೇರಳವಾಗಿವೆ,
ಅರ್ಥ ಮಾಡಿಕೊಳ್ಳುವ ಸಮಯವೂ ಧಾರಾಳವಾಗಿದೆ,
ಸ್ನೇಹಿತರಂತೆ ಇರೋಣ,
ಪ್ರೀತಿಯಾದ ಮೇಲಷ್ಟೇ ಸೇರೋಣ,
ನನ್ನ ಮಗುವಿನಲ್ಲಿ ನನ್ನ ತಾಯಿಯನ್ನು
ಕಾಣುವ ಆಸೆಯಿತ್ತು,
ಇಂದು ತಾಳಿ ಕಟ್ಟಿದ ನಾನೇ
ನಿನಗೆ ತಾಯಿಯಾಗುವ ಅವಕಾಶ ಬಂತು!
ಹೆಣ್ಣು ನೋಡಲು ಬಂದಾಗ ನೀ ಕೊಟ್ಟ
ಚಹಾದಲ್ಲಿ ಸಕ್ಕರೆ ಕಡಿಮೆ ಇದ್ದಾಗಲೇ
ಅರ್ಥವಾಗಿತ್ತು ನಿನಗಿಲ್ಲ ಈಗ
ಮದುವೆ ಆಗುವ ಮೋಹ,
ಹೆತ್ತವರ ಮಾತಿಗೆ ಒಪ್ಪಿದೆ,
ನಾ ಬಿಗಿದ ಮೂರು ಗಂಟಿಗೆ ಕಟ್ಟುಬಿದ್ದೆ,
ಮಾಲೆಯ ಹೊತ್ತ ನಿನ್ನ ಕೊರಳ ಮೇಲೆ
ನಗುವಿನ ಹೂ ಅರಳದಿದ್ದಾಗಲೇ ನನಗದು ತಿಳಿಯಿತು,
ಮಡಿಲ ಮೇಲೆ ಕೂರಿಸಿಕೊಂಡೆ ಎಂದು
ನಿನ್ನನ್ನು ಒಲ್ಲದ ಮನಸಿನಲಿ ಮಂಚದ ಮೇಲೆ
ನಾನೆಂದೂ ಕೂರಿಸುವುದಿಲ್ಲಾ,
ನನ್ನ ಮುಂದೆ ನೀ ಅಳುವಾಗಲೂ
ನೀ ಒಪ್ಪಿಗೆ ನೀಡದೆ ಕಣ್ಣ ಒರಸಲು ನಾ ಮುಟ್ಟುವುದಿಲ್ಲ,
ಅವಕಾಶಗಳು ಹೇರಳವಾಗಿವೆ,
ಅರ್ಥ ಮಾಡಿಕೊಳ್ಳುವ ಸಮಯವೂ ಧಾರಾಳವಾಗಿದೆ,
ಸ್ನೇಹಿತರಂತೆ ಇರೋಣ,
ಪ್ರೀತಿಯಾದ ಮೇಲಷ್ಟೇ ಸೇರೋಣ,
ನನ್ನ ಮಗುವಿನಲ್ಲಿ ನನ್ನ ತಾಯಿಯನ್ನು
ಕಾಣುವ ಆಸೆಯಿತ್ತು,
ಇಂದು ತಾಳಿ ಕಟ್ಟಿದ ನಾನೇ
ನಿನಗೆ ತಾಯಿಯಾಗುವ ಅವಕಾಶ ಬಂತು!
No comments:
Post a Comment