Monday, 28 January 2019

ಬಳ್ಳಿಯ ಬದುಕು ನನ್ನದು!
--------------------------
ಸಂಬಂಧದ ಎಲೆಗಳ ಜೊತೆಗೆ!
ಜೀವನದ ನಡಿಗೆ!
ಕಾಲದ ಎಲ್ಲೆಯ ಮೀರಿ ಯಾವ ಎಲೆಯೂ
ಬಳ್ಳಿಯಲಿ ನಿಲ್ಲದು!
ಎಲೆ ಬಿದ್ದ ಮೇಲೂ ಅದರ ಗುರುತು ಮಾಸದು!
ಅತಿಯಾಗಿ ಸುತ್ತಿಕೊಂಡರೂ
ಅದ ಬಿಟ್ಟು,
ಮುಂದೆ ಸಾಗಬೇಕು ಎನ್ನುವ ನೆನಪಿದೆ!
ಒಣಗಿದ್ದಾಗ ನೋಡಿಕೊಂಡೇ ಹೋದವರೆಲ್ಲ 
ಹಸಿರಾಗಿದ್ದಾಗ ಹತ್ತಿರವಿದ್ದವರೇ!
ಬಾನನ್ನೇ ಮುಟ್ಟುವ ಬಯಕೆ ಇದ್ದರೂ!
ನೀ ಬಾಡದಿರಲು ಕಾಲುಗಳು
ನೆಲದಲ್ಲೇ ಇರಲಿ ಎಂದು
ಹೇಳುತ್ತಿರುತ್ತದೆ ಬೇರು!

No comments:

Post a Comment