Monday, 28 January 2019

ಮತ್ತೊಮ್ಮೆ ಮಗುವಾಗಬೇಕಿದೆ!!!!
----------------------------
ನಾಗರಿಕತೆಯ ಗೂಡಾರದೊಳಗೆ ಬಚ್ಚಿಟ್ಟುಕೊಂಡಿರುವ 
ನನ್ನೊಳಗಿನ ಮಗುವನ್ನು ಕ್ಷಣಿಕವಾದರೂ ಹೊರ ಕರೆಯಬೇಕಿದೆ!
ನೆನ್ನೆ ನಾಳೆಗಳ ಮರೆತು ಇಂದು ಮಾತ್ರವೇ ಜೀವಿಸುವ 
ಹೂವೊಂದನ್ನು ಮತ್ತೊಮ್ಮೆ ಮನದೊಳಗೆ ಅರಳಿಸಬೇಕಿದೆ !
ಕಾಮನ ಬಿಲ್ಲನ್ನು ಮುಟ್ಟದೆ, ಮೈ ಮೇಲೆ ಬಣ್ಣಗಳ ಬಳಿದುಕೊಂಡು 
ಈ ಭೂಮಿಯ ಚೂರು ಸುತ್ತಿ ಬರುವ ಚಿಟ್ಟೆಯ ಹಿಡಿದು ಬಿಟ್ಟು 
ಬೆರಳತುದಿಯಲ್ಲಿನ ಮಸಿಯನ್ನು ಹಣೆಗೆ 
ತಿಲಕವಾಗಿ ಇಟ್ಟುಕೊಂಡು ನಲಿಯುವ ಬಾಲಕನಾಗಬೇಕಿದೆ !
ಖಾಲಿ ಕಾಗದದ ಮೇಲೆ ಆಕಾರದ ಜೊತೆ ಹೊಂದಾಣಿಕೆ ಮಾಡಿಕೊಳ್ಳದೆ 
ಬೇಕೆನ್ನುವುದ ಬರೆದು ನಂತರ ಅದಕೊಂದು ಹೆಸರನ್ನು ಇಟ್ಟು ಕರೆದು 
ನಗುವ ಮಗುವನ್ನು ನೋಡುವ ಬಯಕೆಯಾಗಿದೆ!

No comments:

Post a Comment