Wednesday, 2 November 2011

ನೀ ಬಿಟ್ಟು ಹೋದ ಕ್ಷಣ..,


ಆಗಸದಲ್ಲಿ ಕಾರ್ಮೋಡ ಕವಿದು,
ಮೊಬ್ಬಾಗಿ ಬಳಲುತ್ತಿದ್ದ ರವಿ
ಕ್ಷಣ ಕಾಲದಲ್ಲಿ ಮೋಡದ
ಮರೆಗೆ ಸಾಗಿ ಆವಿಯ
ಹಾಗೇ ಮರೆಯಾದ.

ಪಕ್ಷಿಗಳು ಒಮ್ಮೆಲೇ
ಚಿಮ್ಮಿದವು ಗೂಡಿನತ್ತ,
ಮೇಲ್ಹನೆ ಬೀಸುವ ತಂಗಾಳಿಗೆ
ಮನಸೋತು ಸಾಗಿದೆ
ಒಂಟಿ ಮನೆಯತ್ತ,

ಬರಬರನೆ ಬಂದ ಮಳೆಯಲ್ಲಿ
ಜುಮ್ಮನೆ ನೆನೆಯುತ್ತಾ ನಿಂತೇ
ಸೇತುವೆಯ ಬದಿಯಲ್ಲಿ,


ಒಲ್ಲದ ಮನಸಿನಲ್ಲಿ
ಸಾವಿನ ಸುಳಿಯಲ್ಲಿ ಶರಣಾಗುವ
ಇಚ್ಛೆ ಮನದಲ್ಲಿ ಮೂಡಿತ್ತು,
ಬಿಟ್ಟು ಹೋದ ಕಂದನನ್ನು

ನೆನೆದು ಕಣ್ಣಲಿ ಹನಿಗಳು ತುಂಬಿತ್ತು..   

ನೆನಪಿನ ನಾವಿಕ!!!
** Nj ಗೌಡ **

4 comments:

  1. ಕವಿತೆ ಅದ್ಭುತವಾಗಿದೆ. ಕೊನೆ ಘಟ್ಟದಲ್ಲಿ ತಿರುವು.

    ReplyDelete
  2. @abdul satthar... ತುಂಬು ಹೃದಯದ ಧನ್ಯವಾದಗಳು!!!

    ReplyDelete
  3. @ಮೌನರಾಗ... ಧನ್ಯವಾದಗಳು

    ReplyDelete