ಇದುವರೆಗೂ ಇಲ್ಲದ ಭಾವನೆಗಳು
ಮೂಡುತ್ತಿದೆ ಮನಸಿನಲ್ಲಿ,

ನೆನಪುಗಳು ಕಾಡುತ್ತಿದೆ ನನ್ನಲ್ಲಿ,
ಇದುವರೆಗೂ ಇಲ್ಲದ ಸಂತಸ
ಅಲೆಯೆದ್ದಿದೆ ಮೊಗದಲ್ಲಿ,
ಇಲ್ಲೇ ಎಲ್ಲೊ ಇದ್ದಹಾಗೆ,
ಮತ್ತೆ ಮತ್ತೆ ಕರೆದಹಾಗೆ,
ಕೆನ್ನೆ ಸವರಿ ಹೋದಹಾಗೆ,
ಕಣ್ಣ ಮುಂದೆ ನಿಂತಹಾಗೆ,
ಮುತ್ತು ಕೊಟ್ಟು ಮಾಯವಾದಹಾಗೆ,
ಮೂರು ನಿಮಿಷ ನೋಡಿದಕ್ಕೆ
ನಿನ್ನ ಸೆಳತದಲ್ಲಿ ಮಾರುಹೋದೆನಲ್ಲ,
ಮೂರು ಸಾಲುಗಳು ಸಾಲುವುದಿಲ್ಲ
ನಿನ್ನ ವರ್ಣನೆ ಮಾಡುವುದಕ್ಕೆ,
ಮೂರು ವರ್ಷಗಳು ಸಾಲುವುದಿಲ್ಲ
ಬಿಟ್ಟು ಹೋದ ನೆನಪುಗಳ ಮರೆವುದಕ್ಕೆ,
ಮೂರು ಚಿತ್ರಗಳು ಕಂಡರೇನು
ಇರುವ ಮನಸ್ಸು ಒಂದೇ ಅಲ್ಲವೇನು,
ಕಣ್ಣ ಅಂಚಲ್ಲಿ ಹೊತ್ತಿ ಹೋದ
ಮನಸ್ಸಿನ ವ್ಯಥೆ,
ಮರುಭೂಮಿಯಲ್ಲಿ ದಾರಿಕಾಣದೆ
ಸೋತು ನಿಂತವನ ಕಥೆ..
ನೆನಪಿನ ನಾವಿಕ!!!
** Nj ಗೌಡ **
ಯೋಗರಾಜ ಭಟ್ಟರು ನೋಡಿಯಾರು ಹುಷಾರು!!, ಈ ಕವಿತೆಗೆ ಮೇಕಪ್ ಮಾಡಿ ಮತ್ತೊಂದು ಸುಂದರ ಚಿತ್ರವಾಗಿಸಬಹುದು. ಹಾಗಿದೆ ನಿಮ್ಮೀ ಕವಿತೆ. ಎಂದೋ ಬಿಟ್ಟು ಹೋದ ಹುಡುಗಿ, ಕಳೆದು ಹೋದ ಹುಡುಗಿ ದಾರಿಯಲ್ಲೊಮ್ಮೆ, ಬಸ್ಸಿನಲ್ಲೊಮ್ಮೆ ಅಥವಾ ಇನ್ನೆಲ್ಲೋ ಸಿಕ್ಕಾಗ ಆ ಪುಟ್ಟ ಹೃದಯದ ಒದ್ದಾಟ ಸುಂದರವಾಗಿ ಚಿತ್ರಿತವಾಗಿದೆ. ಬಹುಷ್ಯಹಾ ನಿಮ್ಮ ಅನುಭವ ಇರಬಹುದೇನೋ?!!
ReplyDelete@abdul satthar... ದೊಡ್ಡ ಮಾತು.. ನನ್ನ ಜೀವನದಲ್ಲಿ ಅದಾ ಅನುಭವನ್ನು ಮತ್ತೆ ಮತ್ತೆ ನೆನೆಯುವ ಚಟ, ಮತೊಮ್ಮೆ ಅವಳ ಪ್ರೀತಿಯ ಸವಿಯನ್ನು ಪಡಿಯಬೇಕು ಅನುವಾ ಹಠ ಮನದಲ್ಲಿ ಮೂಡಿದೆ..
ReplyDelete