
ಇಲ್ಲದವರು ಇರುವವರನ್ನು
ನೋಡಿ ನಲಿಯಬೇಕು,
ಬಡವನಾದರೇನು ಭಿಕ್ಷೆ ಬೇಡಿದರೇನು
ತಿನ್ನುವುದು ಎರಡು ತುತ್ತು ಅನ್ನವೇ,
ಶ್ರೀಮಂತನಾದರೇನು ಕಾರಿನಲ್ಲಿ ಬಂದರೇನು
ಕೊನೆಗೆ ಸೇರುವುದು ಮಣ್ಣಿಗೆ,
ನಾನೇನು ಮಾಡಲಿ
ಸಾಮಾನ್ಯ ಪ್ರಜೆ ಕಣಯ್ಯಾ..
ರಾಜಕಾರಣಿಗಳು ಕುರ್ಚಿಗಾಗಿ ಕಚ್ಚಾಟ
ತುಂಡು ರೊಟ್ಟಿಗಾಗಿ ಕಸದ
ರಾಶಿಯಲ್ಲಿ ಗುದ್ದಾಟ,
ಪ್ರತ್ಯೇಕ ರಾಜ್ಯಕ್ಕಾಗಿ ಪಕ್ಕದ
ರಾಜ್ಯದಲ್ಲಿ ಒದೆದಾಟ
ಒಂದು ಕಿಲೋ ಧಾನ್ಯಕ್ಕಾಗಿ
ಅಂಗಡಿ ಮುಂದೆ ತಳ್ಳಾಟ,
ನಾನೇನು ಮಾಡಲಿ
ಸಾಮಾನ್ಯ ಪ್ರಜೆ ಕಣಯ್ಯಾ..
ಊರ ಗೌಡನಿಗೆ ತನ್ನ
ಬಳಗದ ಮೇಲೆ ಪ್ರೀತಿ,
ಸತ್ತ ಮಂದಿಗಳು ತಲೆಬಾಗಬೇಕು
ಇವನ ನೀತಿಗೆ,
ಸುಟ್ಟು ಕಪ್ಪಾಗಿದೆ ದೇವರ
ಮುಂದೆ ಇಟ್ಟ ಬತ್ತಿ,
ಸೋತು ಶವವಾದ ಸಾಲದ
ಹೊರೆಯನು ಹೊತ್ತಿ,
ನಾನೇನು ಮಾಡಲಿ
ಸಾಮಾನ್ಯ ಪ್ರಜೆ ಕಣಯ್ಯಾ..
ನೆನಪಿನ ನಾವಿಕ!!!
** Nj ಗೌಡ **
ಕವಿತೆ ತುಂಬಾ ಚನ್ನಾಗಿದೆ.ಇದನ್ನೂ ಇನ್ನೂ ಪಕ್ವಗೊಳಿಸಬಹುದು.ಹತ್ತಾರು ಭಾರಿ ಮತ್ತೆ ಮತ್ತೆ ಓದಿರಿ ಇನ್ನಷ್ಟು ಸುಂದರಗೊಳಿಸಲು ಪ್ರಯತ್ನಿಸಿರಿ
ReplyDelete