
ಮಾತಲ್ಲಿ ಜೊತೆಯಾಗಿ ಭಾವಗಳಲ್ಲಿ ಒಂದಾಗಿ
ಬರೆಯೋಣ ಹೊಸ ಬದುಕಿನ ಮುನ್ನುಡಿ
ಬೀಸುವ ಗಾಳಿಗೆ ಎದೆ ಒಡ್ಡಿ
ನಿನ್ನ ಎಲ್ಲ ಕಲರವಗಳಿಗೆ ಕಿವಿ ಒಡ್ಡಿ
ಕಾಪಾಡುವೆ ಕಪ್ಪೆ ಚಿಪ್ಪಿನ ಮುತ್ತಿನಹಾಗೆ
ಗೋಗರೆದು ಸುರಿಯುವ ಮಳೆಯಲ್ಲಿ
ಸಿಡಿಲನ್ನು ಹಿಡಿಯುವ ಶಕ್ತಿಯಿದೆ ನಿನ್ನ ಮುತ್ತಿನಲ್ಲಿ,
ಮನದ ಇಚ್ಛೆ ಕಂಗೊಳಿಸುತ್ತಿದೆ ನಿನ್ನ ಕಣಗಳಲ್ಲಿ,
ಮನಸಿನ ಸ್ಥಿಮಿತಗಳು ಮೆಲ್ಲನೆ ನಕ್ಕಿ
ಹೃದಯದ ಬಡಿತವನ್ನು ಸರ್ರನೆ ಹೊಕ್ಕಿ
ತನ್ಮಯವಾದೆನು ನಿನ್ನ ಒಲಿಮೆಗೆ ಸಿಕ್ಕಿ
ನಿನ್ನ ಸಂಪೂರ್ಣ ನೋಟದಲ್ಲಿ
ಸೆಳೆದಿರುವೆ ನಿನ್ನ ಮನದ ಅಂಗಳಕ್ಕೆ
ಹಾಸಿರುವೆ ಆಸೆಗಳ ರತ್ನ ಕಂಬಳಿ
ಅದರ ಮೇಲೆ ನಡಿಯಲು ನಾನು ಅರ್ಹನೆ
ನಿನ್ನ ಕಣ್ಣ ಹನಿಯಲ್ಲಿ ಕಂಡ ಕನಸಿಗೆ
ಜೀವ ತುಂಬುವೆ ನಿನ್ನ ಪ್ರತಿ
ಒಂದು ಹೆಜ್ಜೆಯಲ್ಲಿ ಕಾಣುವೆ
ನಮ್ಮ ಜೀವನದ ಆಶಾಕಿರಣ
ಹುಚ್ಚು ಮನದ ತುಡಿತಕ್ಕೆ ಶರಣಾಗಿ
ನಿನ್ನ ಎಲ್ಲಾ ಭಾವನೆಗಳಿಗೆ ತಲೆಬಾಗಿ
ನಡೆಯಲು ಬಯಸುವೆ ನಿನ್ನ ಜೊತೆ
ಕೊನೆಯ ಬಡಿತ ನಿಲ್ಲುವರೆಗೂ
ಕಾಲ ಚಕ್ರ ಕೂಗಿ ಕರೆಯೋವರೆಗೂ...
ನೆನಪಿನ ನಾವಿಕ!!!
** Nj ಗೌಡ **
No comments:
Post a Comment