Wednesday, 30 November 2011

ನೊಂದ ಮನಸಿನ ವೇದನೆ!!!


ಪ್ರೀತ್ಸೋ ಹೃದಯಾನ
ಎಷ್ಟು ನೋಯಿಸಿದ್ರು
ಅದು ಪ್ರೀತಿಸೋದನ್ನು ನಿಲ್ಸೋದಿಲ್ಲ...     
..
ಅದೇ ಹೃದಯಕ್ಕೆ
ಮೊಸಮಾದಿದ್ದರೆ ಮತ್ತೆ
ಯಾರನ್ನು ಪ್ರೀತಿಸೋಲ್ಲ....

ನೆನಪಿನ ನಾವಿಕ!!!
**Nj ಗೌಡ**

Thursday, 24 November 2011

ಏನು ಮಾಡಲಿ!!!

ಉಳ್ಳವರು ಇಲ್ಲದವರಿಗೆ ಕೊಡಬೇಕು
ಇಲ್ಲದವರು ಇರುವವರನ್ನು
ನೋಡಿ ನಲಿಯಬೇಕು,
ಬಡವನಾದರೇನು ಭಿಕ್ಷೆ ಬೇಡಿದರೇನು
ತಿನ್ನುವುದು ಎರಡು ತುತ್ತು ಅನ್ನವೇ,
ಶ್ರೀಮಂತನಾದರೇನು ಕಾರಿನಲ್ಲಿ ಬಂದರೇನು
ಕೊನೆಗೆ ಸೇರುವುದು ಮಣ್ಣಿಗೆ,
ನಾನೇನು ಮಾಡಲಿ
ಸಾಮಾನ್ಯ ಪ್ರಜೆ ಕಣಯ್ಯಾ..    

ರಾಜಕಾರಣಿಗಳು ಕುರ್ಚಿಗಾಗಿ ಕಚ್ಚಾಟ
ತುಂಡು ರೊಟ್ಟಿಗಾಗಿ ಕಸದ
ರಾಶಿಯಲ್ಲಿ ಗುದ್ದಾಟ,
ಪ್ರತ್ಯೇಕ ರಾಜ್ಯಕ್ಕಾಗಿ ಪಕ್ಕದ
ರಾಜ್ಯದಲ್ಲಿ ಒದೆದಾಟ
ಒಂದು ಕಿಲೋ
ಧಾನ್ಯಕ್ಕಾಗಿ
ಅಂಗಡಿ ಮುಂದೆ ತಳ್ಳಾಟ
,
ನಾನೇನು ಮಾಡಲಿ
ಸಾಮಾನ್ಯ ಪ್ರಜೆ ಕಣಯ್ಯಾ..

ಊರ ಗೌಡನಿಗೆ ತನ್ನ
ಬಳಗದ ಮೇಲೆ ಪ್ರೀತಿ,
ಸತ್ತ ಮಂದಿಗಳು ತಲೆಬಾಗಬೇಕು
ಇವನ ನೀತಿಗೆ,
ಸುಟ್ಟು ಕಪ್ಪಾಗಿದೆ ದೇವರ
ಮುಂದೆ ಇಟ್ಟ ಬತ್ತಿ,
ಸೋತು
ಶವವಾದ ಸಾಲದ
ಹೊರೆಯನು  ಹೊತ್ತಿ
,
ನಾನೇನು ಮಾಡಲಿ
ಸಾಮಾನ್ಯ ಪ್ರಜೆ ಕಣಯ್ಯಾ..

ನೆನಪಿನ ನಾವಿಕ!!!

** Nj ಗೌಡ **


Friday, 18 November 2011

ಮುಂದೆ ಸಾಗು!!!


ಬಿಟ್ಟಾಕು ನಿನ್ನ ಪ್ರೀತಿಗೆ
ಪೆಟ್ಟು ಕೊಟ್ಟವಳನ್ನು
ಆದರೆ ಅವಳ ನೆನಪುಗಳನ್ನಲ್ಲ,­ ­

ಸುಟ್ಟಿಹಾಕು ಅವಳು
ಕೊಟ್ಟ ಉಡುಗೊರೆಗಳನ್ನಲ್ಲ                               
ಆದರೆ ಅವಳ ಹೆಸರನಲ್ಲ,                                               

ಕಟ್ಟಿಹಾಕು ಅವಳು                  
ತುಂಬಿದ್ದ ಆಸೆಗಳನ್ನು
ಆದರೆ ನಿನ್ನ ಗುರಿಗಳನಲ್ಲ,


ಮರೆತು ಮುಂದೆ ಸಾಗು
ಆದರೆ ಅವಳಿಂದ ಕಲಿತ
ಜೀವನಪಾಠಗಳನ್ನಲ್ಲ ­,

ನೆನಪಿನ ನಾವಿಕ!!!

** Nj ಗೌಡ **

Tuesday, 15 November 2011

ಹೊಸ ಬದುಕಿನ ಅಂಚಿನಲ್ಲಿ!!!

ಕೈಯಲ್ಲಿ ಕೈ ಹಿಡಿದು ಕಣ್ಣಲ್ಲಿ ಕಣ್ಣ ಸೆಳದು
ಮಾತಲ್ಲಿ ಜೊತೆಯಾಗಿ ಭಾವಗಳಲ್ಲಿ ಒಂದಾಗಿ
ಬರೆಯೋಣ ಹೊಸ ಬದುಕಿನ ಮುನ್ನುಡಿ
ಬೀಸುವ ಗಾಳಿಗೆ ಎದೆ ಒಡ್ಡಿ
ನಿನ್ನ ಎಲ್ಲ ಕಲರವಗಳಿಗೆ ಕಿವಿ ಒಡ್ಡಿ
ಕಾಪಾಡುವೆ ಕಪ್ಪೆ ಚಿಪ್ಪಿನ ಮುತ್ತಿನಹಾಗೆ

ಗೋಗರೆದು ಸುರಿಯುವ ಮಳೆಯಲ್ಲಿ
ಸಿಡಿಲನ್ನು ಹಿಡಿಯುವ ಶಕ್ತಿಯಿದೆ ನಿನ್ನ ಮುತ್ತಿನಲ್ಲಿ,                          
ಮನದ ಇಚ್ಛೆ ಕಂಗೊಳಿಸುತ್ತಿದೆ ನಿನ್ನ ಕಣಗಳಲ್ಲಿ,
ಮನಸಿನ ಸ್ಥಿಮಿತಗಳು ಮೆಲ್ಲನೆ ನಕ್ಕಿ
ಹೃದಯದ ಬಡಿತವನ್ನು ಸರ್ರನೆ ಹೊಕ್ಕಿ
ತನ್ಮಯವಾದೆನು ನಿನ್ನ ಒಲಿಮೆಗೆ ಸಿಕ್ಕಿ

ನಿನ್ನ ಸಂಪೂರ್ಣ ನೋಟದಲ್ಲಿ
ಸೆಳೆದಿರುವೆ ನಿನ್ನ ಮನದ ಅಂಗಳಕ್ಕೆ
ಹಾಸಿರುವೆ ಆಸೆಗಳ ರತ್ನ ಕಂಬಳಿ
ಅದರ ಮೇಲೆ ನಡಿಯಲು ನಾನು ಅರ್ಹನೆ

ನಿನ್ನ ಕಣ್ಣ ಹನಿಯಲ್ಲಿ ಕಂಡ ಕನಸಿಗೆ               
ಜೀವ ತುಂಬುವೆ ನಿನ್ನ ಪ್ರತಿ
ಒಂದು ಹೆಜ್ಜೆಯಲ್ಲಿ ಕಾಣುವೆ
ನಮ್ಮ ಜೀವನದ ಆಶಾಕಿರಣ
ಹುಚ್ಚು ಮನದ ತುಡಿತಕ್ಕೆ ಶರಣಾಗಿ
ನಿನ್ನ ಎಲ್ಲಾ ಭಾವನೆಗಳಿಗೆ ತಲೆಬಾಗಿ
ನಡೆಯಲು ಬಯಸುವೆ ನಿನ್ನ ಜೊತೆ
ಕೊನೆಯ ಬಡಿತ ನಿಲ್ಲುವರೆಗೂ
ಕಾಲ ಚಕ್ರ ಕೂಗಿ ಕರೆಯೋವರೆಗೂ...

ನೆನಪಿನ ನಾವಿಕ!!!
** Nj ಗೌಡ **

Monday, 14 November 2011

ಪರಿತಪ್ಪಿಸು!!!

ಬೆಂಕಿಗೆ ಸಿಕ್ಕ ಮೇಣದ ಹಾಗೆ
ಅಲೆಯ ಒದತ್ತಕೆ ಸಿಕ್ಕ ಬಂದೆ ಹಾಗೆ
ಹಸಿದ ಹೆಬುಲ್ಲಿ ಸಿಕ್ಕ ಜಿಂಕೆ ಹಾಗೆ
ನನ್ನ ಎಲ್ಲ ಭಾವನೆಗಳು ಪರಿತಪ್ಪಿಸುತ್ತಿದೆ ದಾರಿ ಕಾಣದೆ....


ನೆನಪಿನ ನಾವಿಕ!!!
** Nj ಗೌಡ **

Tuesday, 8 November 2011

ಮತ್ತೆ ಏಕೆ ಬಂದೆ!!!


ಇದುವರೆಗೂ ಇಲ್ಲದ ಭಾವನೆಗಳು
ಮೂಡುತ್ತಿದೆ ಮನಸಿನಲ್ಲಿ,
ಇದುವರೆಗೂ ಇಲ್ಲದ
ನೆನಪುಗಳು
ಕಾಡುತ್ತಿದೆ ನನ್ನಲ್ಲಿ,
ಇದುವರೆಗೂ ಇಲ್ಲದ ಸಂತಸ
ಅಲೆಯೆದ್ದಿದೆ ಮೊಗದಲ್ಲಿ,

ಇಲ್ಲೇ ಎಲ್ಲೊ ಇದ್ದಹಾಗೆ,                                                               
ಮತ್ತೆ ಮತ್ತೆ ಕರೆದಹಾಗೆ,
ಕೆನ್ನೆ ಸವರಿ ಹೋದಹಾಗೆ,
ಕಣ್ಣ ಮುಂದೆ ನಿಂತಹಾಗೆ,
ಮುತ್ತು ಕೊಟ್ಟು ಮಾಯವಾದಹಾಗೆ,

ಮೂರು ನಿಮಿಷ ನೋಡಿದಕ್ಕೆ
ನಿನ್ನ ಸೆಳತದಲ್ಲಿ ಮಾರುಹೋದೆನಲ್ಲ,
ಮೂರು ಸಾಲುಗಳು ಸಾಲುವುದಿಲ್ಲ
ನಿನ್ನ ವರ್ಣನೆ ಮಾಡುವುದಕ್ಕೆ,
ಮೂರು ವರ್ಷಗಳು ಸಾಲುವುದಿಲ್ಲ
ಬಿಟ್ಟು ಹೋದ ನೆನಪುಗಳ ಮರೆವುದಕ್ಕೆ,
ಮೂರು ಚಿತ್ರಗಳು ಕಂಡರೇನು
ಇರುವ ಮನಸ್ಸು ಒಂದೇ ಅಲ್ಲವೇನು,

ಕಣ್ಣ ಅಂಚಲ್ಲಿ ಹೊತ್ತಿ ಹೋದ
ಮನಸ್ಸಿನ ವ್ಯಥೆ,
ಮರುಭೂಮಿಯಲ್ಲಿ ದಾರಿಕಾಣದೆ
ಸೋತು ನಿಂತವನ ಕಥೆ..

ನೆನಪಿನ ನಾವಿಕ!!!
** Nj ಗೌಡ **

Wednesday, 2 November 2011

ನೀ ಬಿಟ್ಟು ಹೋದ ಕ್ಷಣ..,


ಆಗಸದಲ್ಲಿ ಕಾರ್ಮೋಡ ಕವಿದು,
ಮೊಬ್ಬಾಗಿ ಬಳಲುತ್ತಿದ್ದ ರವಿ
ಕ್ಷಣ ಕಾಲದಲ್ಲಿ ಮೋಡದ
ಮರೆಗೆ ಸಾಗಿ ಆವಿಯ
ಹಾಗೇ ಮರೆಯಾದ.

ಪಕ್ಷಿಗಳು ಒಮ್ಮೆಲೇ
ಚಿಮ್ಮಿದವು ಗೂಡಿನತ್ತ,
ಮೇಲ್ಹನೆ ಬೀಸುವ ತಂಗಾಳಿಗೆ
ಮನಸೋತು ಸಾಗಿದೆ
ಒಂಟಿ ಮನೆಯತ್ತ,

ಬರಬರನೆ ಬಂದ ಮಳೆಯಲ್ಲಿ
ಜುಮ್ಮನೆ ನೆನೆಯುತ್ತಾ ನಿಂತೇ
ಸೇತುವೆಯ ಬದಿಯಲ್ಲಿ,


ಒಲ್ಲದ ಮನಸಿನಲ್ಲಿ
ಸಾವಿನ ಸುಳಿಯಲ್ಲಿ ಶರಣಾಗುವ
ಇಚ್ಛೆ ಮನದಲ್ಲಿ ಮೂಡಿತ್ತು,
ಬಿಟ್ಟು ಹೋದ ಕಂದನನ್ನು

ನೆನೆದು ಕಣ್ಣಲಿ ಹನಿಗಳು ತುಂಬಿತ್ತು..   

ನೆನಪಿನ ನಾವಿಕ!!!
** Nj ಗೌಡ **