Sunday, 23 October 2011

***ನಿನ್ನ ಹೆಜ್ಜೆಯ ಗುರುತಿನಲ್ಲಿ ಗೆಜ್ಜೆಯ ಸದ್ದು***

ನಿನ್ನ ಹೆಜ್ಜೆಯ ಗುರುತುಗಳಿಗೆ ಸಾವಿಲ್ಲ,
ನಿನ್ನ ಗೆಜ್ಜೆಯ ಶಬ್ದಕ್ಕೆ ಕೊನೆ ಇಲ್ಲ,
ನೀ ಬಿಟ್ಟು ಹೋದ ಕನಸುಗಳಿಗೆ ಜೀವ ಇಲ್ಲ,

ನೋಡದೆ ಕಂಗೆಟ್ಟು ಕೂತಿದೆ ಕಣ್ಣಗಳು
ಗೊಗರೆದು ಸುರಿಯುವ ಮಳೆಯ ಮಧ್ಯದಲ್ಲಿ,    
ಸಿಡಿಲುಗಳ ಆರ್ಭಟಕ್ಕೆ ಸೆರೆ ಸಿಕ್ಕಂತೆ,
ಇಳಿ ಜಾರಿನಲ್ಲಿ ಜಾರಿಹೋದ
ಪರಿ ಭಾಸವಾಗಿದೆ ಮನದಲ್ಲಿ,

ಒಮ್ಮೆ ಬರುವೆ ಇರುವೆ ಹಾಗೆ,
ಮೆಲ್ಲನೆ ಕಚ್ಚಿ ಮಾಯವಾಗುವೆ ಚೇಳಿನ ಹಾಗೆ,
ನೋಡಲು ಇಷ್ಟ, ಮುಟ್ಟಲು ಕಷ್ಟ,
ಆ ನೋವಿನಲ್ಲೂ ಹಿತವಿದೆ,
ಬಿಟ್ಟು ಹೋದ ಹೆಜ್ಜೆಯ ಗುರುತಿದೆ,

ಮುಂಗುರಳ ಅಂಚಿನ ಕಣ್ಣ ನೋಟವು,
ಕಳೆದು ಹೋದ ಮನಸಿನ ಹುಡುಕಟವೋ,
ಹೆಜ್ಜೆ ಹೆಜ್ಜೆಗೂ ಕಾಡುತ್ತಿದೆ ನಿನ್ನ ನೆನಪು,
ಸೂರ್ಯನ ಬೆಳಕಿನಲ್ಲೂ ನಿನ್ನದೇ ಹೊಳಪು,


ಏನು ಕಾಣದ ಕುರುಡನಿಗೆ
ನಿನ್ನ ಗೆಜ್ಜೆಯೇ ದಾರಿದೀಪ,
ನಿನ್ನಗಾಗಿ ಕಾದು ಕುಳಿತಿದೆ
ನನ್ನ ಮನದಂಗಳದ ದೀಪ,
ಮರಳಿ ಬಾ ಬಿಟ್ಟು ಹೋದ
ಕನಸಿಗೆ ಜೀವ ತುಂಬಲು
ಬಿಟ್ಟು ಹೋದ ಗೆಜ್ಜೆಗೆ
ಹೊಸ ರೂಪ ತರಲು..


ನೆನಪಿನ ನಾವಿಕ!!!
** Nj ಗೌಡ **

No comments:

Post a Comment