Friday, 14 October 2011

ಎಲ್ಲಿಗೆ ಹೋದೆ????

ಮುಗಿದು ಹೋದ ಪುಟ್ಟಗಳಲ್ಲಿ ಮತೊಮ್ಮೆ
ನಿನ್ನ ಹೆಸರು ಬರೆಯುವ ಆಸೆ.
ಬಿಟ್ಟು ಹೋದ ಕನಸುಗಳಿಗೆ ಮತೊಮ್ಮೆ
ಜೀವ ತುಂಬುವ ಆಸೆ,
ನನ್ನ ಎಲ್ಲ ಬರವಣಿಗೆ ಸಾರಿಸಾರಿ ಹೇಳುತ್ತಿದೆ
ನೀನಿಲ್ಲದೆ ಪಟ್ಟ ನೋವನ್ನು,
ಪದಗಳು ಪರದಾಡುತ್ತಿದೆ                                                      
ಪದಗುಂಚವ ಸೇರದೆ,
ಮನಸಿನ ತಳಮಳವ ಕೇಳಲಾರದೆ,  
ಚಿಂತೆಗಳನು ಬದಿಗಿಟ್ಟು,
ಸೆಳತಗಳನು ಮುಂದಿಟ್ಟು,
ನಕ್ಕಹಾಗೆ ನಟಿಸಿ,
ಕಣ್ಣೀರ ಒರೆಸಿ,
ಪ್ರೀತಿಯೆಂಬ ತರಂಗಳು ಮನದಲ್ಲಿ ಹೊಕ್ಕಿ,
ಕನಸ್ಸಿನ ದಾರಿಯನ್ನು ಮುಚ್ಚಿ,
ಮನಸೆಂಬ ಮಂದಿರಕ್ಕೆ ಬೀಗವ ಜಡಿದು,
ಬಟ್ಟ ಬೈಲಿನ ಕತ್ತಲೆಯಲ್ಲಿ
ಕಣ್ಣಿದ್ದರೂ ಕುರುಡಂತೆ
ಅಲೆಯುತ್ತಿರುವೆ ದಾರಿ ಕಾಣದೆ.. 

ನೆನಪಿನ ನಾವಿಕ!!!
** Nj ಗೌಡ **

No comments:

Post a Comment