Friday, 28 October 2011

**ಹುಟ್ಟು..,**

ಆಸೆ ಹುಟ್ಟಿದ್ದು
ಬದುಕಿನ ಭರವಸೆಗಳನು ಉಳಿಸಲು,


ತಾಳ್ಮೆ ಹುಟ್ಟಿದ್ದು
ಕೋಪಕ್ಕೆ ಕಡಿವಾಣ ಹಾಕಿಸಲು,

ಮೊಗ್ಗು ಹುಟ್ಟಿದ್ದು
ಹೂವಾಗಿ ಸುಗಂದವನು ಪಸರಿಸಲು, 

ಸೂರ್ಯ ಹುಟ್ಟಿದ್ದು
ಭೂಮಿಗೆ ಬೆಳಕನು ಸ್ಪರ್ಶಿಸಲು,

ಋಷಿಗಳು ಹುಟ್ಟಿದ್ದು
ಯಜ್ಞ ಯಾಗಾದಿಗಳನ್ನು ಮಾಡಿಸಲು,

ಕವಿತೆ ಹುಟ್ಟಿದ್ದು,
ಭಾವನೆಗಳನ್ನು ವರ್ಣಿಸಲು,

ಪ್ರೀತಿ ಹುಟ್ಟಿದ್ದು,
ಹೃದಯದ ಮಿಡಿತ ಹೆಚಿಸಲು,


ನೆನಪಿನ ನಾವಿಕ!!!
** Nj ಗೌಡ **

Sunday, 23 October 2011

***ನಿನ್ನ ಹೆಜ್ಜೆಯ ಗುರುತಿನಲ್ಲಿ ಗೆಜ್ಜೆಯ ಸದ್ದು***

ನಿನ್ನ ಹೆಜ್ಜೆಯ ಗುರುತುಗಳಿಗೆ ಸಾವಿಲ್ಲ,
ನಿನ್ನ ಗೆಜ್ಜೆಯ ಶಬ್ದಕ್ಕೆ ಕೊನೆ ಇಲ್ಲ,
ನೀ ಬಿಟ್ಟು ಹೋದ ಕನಸುಗಳಿಗೆ ಜೀವ ಇಲ್ಲ,

ನೋಡದೆ ಕಂಗೆಟ್ಟು ಕೂತಿದೆ ಕಣ್ಣಗಳು
ಗೊಗರೆದು ಸುರಿಯುವ ಮಳೆಯ ಮಧ್ಯದಲ್ಲಿ,    
ಸಿಡಿಲುಗಳ ಆರ್ಭಟಕ್ಕೆ ಸೆರೆ ಸಿಕ್ಕಂತೆ,
ಇಳಿ ಜಾರಿನಲ್ಲಿ ಜಾರಿಹೋದ
ಪರಿ ಭಾಸವಾಗಿದೆ ಮನದಲ್ಲಿ,

ಒಮ್ಮೆ ಬರುವೆ ಇರುವೆ ಹಾಗೆ,
ಮೆಲ್ಲನೆ ಕಚ್ಚಿ ಮಾಯವಾಗುವೆ ಚೇಳಿನ ಹಾಗೆ,
ನೋಡಲು ಇಷ್ಟ, ಮುಟ್ಟಲು ಕಷ್ಟ,
ಆ ನೋವಿನಲ್ಲೂ ಹಿತವಿದೆ,
ಬಿಟ್ಟು ಹೋದ ಹೆಜ್ಜೆಯ ಗುರುತಿದೆ,

ಮುಂಗುರಳ ಅಂಚಿನ ಕಣ್ಣ ನೋಟವು,
ಕಳೆದು ಹೋದ ಮನಸಿನ ಹುಡುಕಟವೋ,
ಹೆಜ್ಜೆ ಹೆಜ್ಜೆಗೂ ಕಾಡುತ್ತಿದೆ ನಿನ್ನ ನೆನಪು,
ಸೂರ್ಯನ ಬೆಳಕಿನಲ್ಲೂ ನಿನ್ನದೇ ಹೊಳಪು,


ಏನು ಕಾಣದ ಕುರುಡನಿಗೆ
ನಿನ್ನ ಗೆಜ್ಜೆಯೇ ದಾರಿದೀಪ,
ನಿನ್ನಗಾಗಿ ಕಾದು ಕುಳಿತಿದೆ
ನನ್ನ ಮನದಂಗಳದ ದೀಪ,
ಮರಳಿ ಬಾ ಬಿಟ್ಟು ಹೋದ
ಕನಸಿಗೆ ಜೀವ ತುಂಬಲು
ಬಿಟ್ಟು ಹೋದ ಗೆಜ್ಜೆಗೆ
ಹೊಸ ರೂಪ ತರಲು..


ನೆನಪಿನ ನಾವಿಕ!!!
** Nj ಗೌಡ **

Tuesday, 18 October 2011

**ಬಿಟ್ಟು ಹೋದಳು **


ಪ್ರೀತಿ ಸೋತಾಗ,
ಸಮಯ ನಿಂತಾಗ,


ಮಾತು ಮುಗಿದಾಗ,

ಮೌನ ಸುಳಿದಾಗ,

ಮೋಡ ಅತ್ತಾಗ,
ಹೂವು ನಕ್ಕಾಗ,

ಗಾಳಿ ಬಿಸಿದಾಗ,
ಕಾಡ್ಗಿಚ್ಚು ಆವರಿಸಿದಾಗ,

ಮಳೆಹನಿ ಬಿದ್ದಾಗ,
ಭೂಮಿ ತಂಪಾದಾಗ

ಕೆಲವರಿಗೆ ಬೇಸರ,
ಹಲವರಿಗೆ ನಗಸರ,

ನೀ ನನ್ನ ಬಿಟ್ಟು ಹೋದಾಗ....

ನೆನಪಿನ ನಾವಿಕ!!!
** Nj ಗೌಡ **

Sunday, 16 October 2011

**ನಿನ್ನೊಳಗೆ**


ನಿನ್ನಲು ಕಾಣುವೆ ನನ್ನ ನಗುವನ್ನು,
ತುಂಬಿದ್ದೆ ನನ್ನ ಜೀವದಲ್ಲಿ ಉತ್ಸಾಹವನ್ನು,
ನೋಡ ಬೇಕೇ ನಾನು ಪಟ್ಟ ನೋವನ್ನು,
ಒಮ್ಮೆ ತಿರುಗೆ ನೋಡು ಆ ನಿನ್ನ ನೆರಳನ್ನು.


ನೆನಪಿನ ನಾವಿಕ!!!
** Nj ಗೌಡ **

**ನೀನಿಲ್ಲ**

ಬೆಳಕಿನಲ್ಲಿ ನೀನಿಲ್ಲ,
ಕತ್ತಲೆಯಲ್ಲಿ ಸೊಬಗಿನಲ್ಲಿ ಏನಿಲ್ಲ,
ಮಿಂಚು ಹುಳುವಂತೆ ಬಂದೆ ನೀನು,
ಸತ್ತ ಮನಸ್ಸಿಗೆ ಸ್ಪೂರ್ತಿ ತಂದೆ ನೀನು,

ನೆನಪಿನ ನಾವಿಕ!!!
** Nj ಗೌಡ **

Friday, 14 October 2011

ಎಲ್ಲಿಗೆ ಹೋದೆ????

ಮುಗಿದು ಹೋದ ಪುಟ್ಟಗಳಲ್ಲಿ ಮತೊಮ್ಮೆ
ನಿನ್ನ ಹೆಸರು ಬರೆಯುವ ಆಸೆ.
ಬಿಟ್ಟು ಹೋದ ಕನಸುಗಳಿಗೆ ಮತೊಮ್ಮೆ
ಜೀವ ತುಂಬುವ ಆಸೆ,
ನನ್ನ ಎಲ್ಲ ಬರವಣಿಗೆ ಸಾರಿಸಾರಿ ಹೇಳುತ್ತಿದೆ
ನೀನಿಲ್ಲದೆ ಪಟ್ಟ ನೋವನ್ನು,
ಪದಗಳು ಪರದಾಡುತ್ತಿದೆ                                                      
ಪದಗುಂಚವ ಸೇರದೆ,
ಮನಸಿನ ತಳಮಳವ ಕೇಳಲಾರದೆ,  
ಚಿಂತೆಗಳನು ಬದಿಗಿಟ್ಟು,
ಸೆಳತಗಳನು ಮುಂದಿಟ್ಟು,
ನಕ್ಕಹಾಗೆ ನಟಿಸಿ,
ಕಣ್ಣೀರ ಒರೆಸಿ,
ಪ್ರೀತಿಯೆಂಬ ತರಂಗಳು ಮನದಲ್ಲಿ ಹೊಕ್ಕಿ,
ಕನಸ್ಸಿನ ದಾರಿಯನ್ನು ಮುಚ್ಚಿ,
ಮನಸೆಂಬ ಮಂದಿರಕ್ಕೆ ಬೀಗವ ಜಡಿದು,
ಬಟ್ಟ ಬೈಲಿನ ಕತ್ತಲೆಯಲ್ಲಿ
ಕಣ್ಣಿದ್ದರೂ ಕುರುಡಂತೆ
ಅಲೆಯುತ್ತಿರುವೆ ದಾರಿ ಕಾಣದೆ.. 

ನೆನಪಿನ ನಾವಿಕ!!!
** Nj ಗೌಡ **

Wednesday, 12 October 2011

**ಕೆಟ್ಟ ಪ್ರಪಂಚದ ಕರಿನೆರಳು**

ಸೋತು ಸೋತು ಎದ್ದು ನಿಂತೆ,
ಸತ್ತು ಸತ್ತು ಬದುಕಿ ಬಂದೆ,
ಕೆಟ್ಟ ಪ್ರಪಂಚದಲ್ಲಿ ಪ್ರೀತಿಗಾಗಿ ಕಾದುಕುಲಿತ್ತೆ
ಕೆಟ್ಟ ಜನರ ನಡುವೆ ಸೆಣಸಿ ನಿಂತೆ,
ಕರಿನೆರಳ ಕಥೆ ಯಾರಿಗೆ ಬೇಕು ಇಲ್ಲಿ,
ಕೊಟ್ಟ ಮನಸ್ಸು ದಿಕ್ಕೆಟ್ಟು ಕುತ್ತಿದೆ,
ಕೆಟ್ಟ ಆಲೋಚನೆಗಳು ಮನದಲ್ಲಿ ಸುಳಿದಿದ್ದೆ,,



ದೊಡ್ಡ ಪಟ್ಟಣದಲ್ಲಿ ಪಟ್ಟ ಪಟ್ಟನೆ 
ಹಾರುವ ಹಕ್ಕಿಗಳು ನೂರಾರು,
ಬಿಟ್ಟ ಕಣ್ಣು ಬಿಟ್ಟಂತೆ ನೋಡುವ 
ಮಂದಿ ಸಾವಿರಾರು,
ಸುಮ್ಮನೆ ನಿಂತರೆ ಮಾತಾಡಿಸುವ ಚಠ,
ಕೆಟ್ಟವರ ಸುಳಿಗೆ ಬೀಳಬಾರದೆಂಬ ಹಠ,
ಕರುಣೆಯ ನೆಪದಲ್ಲಿ ಕರಿಯುತ್ತಾರೆ,
ಅಸಭ್ಯ ರೀತಿಯಲ್ಲಿ ವರತಿಸುತ್ತಾರೆ,
ಇಷ್ಟೇನಾ ಜೀವನ..,!!!

ಕೇಳೋರು ಇಲ್ಲವೆ ಒಂಟಿ 
ಮಹಿಳೆಯ ಆಕ್ರಂದನ,
ಒಂದು ಬ್ರೆಡ್ನ ತುಂಡು ಹೊಟ್ಟೆ
ತುಂಬಿತ್ತು ಒಂದು ದಿನದ ಮಟ್ಟಿಗೆ,
ಒಂದು ಪೈಸೆ ಕಿಸೆಯಲಿಲ್ಲ
ಮುಂದೆ ಹುಟ್ಟುವ ಕಂದನಿಗೆ, 

ಪ್ರೀತಿಯ ಸುಳ್ಳಿಯಲ್ಲಿ ಬಿದ್ದಿದಕ್ಕೆ,
ತಂದೆ ತಾಯಿ ತೊರೆದಿದ್ದಕ್ಕೆ,
ನಂಬಿ ಜೊತೆಯಲ್ಲಿ ಬಂದಿದಕ್ಕೆ,
ಒಂದು ನಿಮಿಷ, ಮೈ ಮರೆತ್ತಿದ್ದಕ್ಕೆ
ಪಟ್ಟ ನೋವಿನ ಕಥೆ, ಮೊಸಹೊದವಳ ವ್ಯಥೆ.., !!




ನೆನಪಿನ ನಾವಿಕ!!!
** Nj ಗೌಡ **

!!**ಜಗತ್ ಜನನಿ**!!

ಬದ್ಕೆಂಬ ಬಟ್ಟಲಿನಲ್ಲಿ
ಕತ್ತಲೆಯ ಕಷ್ಟಗಳು,


ನಡುವೆ ಕಾಡುವ ನಿಗೋಡ
ನಗುವೆಂಬ ಕಡಲು,

ನಗು ಇರುವ ಜಾಗವೇ
ಮಮತೆಯ ಒಡಲು,
 

ಪ್ರಪಂಚವನ್ನೇ ಮರೆಸುವುದು
ತಾಯಿಯ ಮಡಿಲು,
 

ನೆನಪಿನ ನಾವಿಕ!!!
** Nj ಗೌಡ **

 

Tuesday, 11 October 2011

**ಮಾಯಗಾತಿ**


ಕ್ಷಣಕ್ಕೊಮ್ಮೆ ಮೂಡುವುದು 
ನಿನ್ನ ಚಿತ್ರ ಬಾನಿನಲ್ಲಿ,
ಸೂರ್ಯನ ಶಾಖಕ್ಕೆ ಹೇಗಿರುವೆ
ಅವನ ಪಕ್ಕದಲ್ಲಿ,

ಆಕಾಶದ ಎತ್ತರಕೆ ಹಾರುವ
 ಶಕ್ತಿ ನನಗಿಲ್ಲ 
ನಿನ್ನಗಾಗುವ ನೋವನ್ನು 
ಸೈಸುವ ಮನಸ್ಸು ನನಗಿಲ್ಲ,
ಎಲ್ಲಕ್ಕೂ ಒಂದು ಕೊನೆ ಇದೆ, 
ಪ್ರತಿಯೊಂದಕ್ಕೂ ಒಂದು ಬೆಲೆ ಇದೆ ,

ಇಷ್ಟ ಕಷ್ಟಗಳ ನಡುವೆ,
ನೋವು ನಲಿವುಗಳ ಜೊತೆ,
ನನ್ನ ಎಲ್ಲ ನೋವನ್ನು 
ಮರೆಯುತ್ತಿರುವೆ ಆ 
ನಿನ್ನ ಸಣ್ಣ 
ನಗುವ ನೋಡುತ್ತ..,


ನೆನಪಿನ ನಾವಿಕ!!!

** Nj ಗೌಡ **

** ಗೆಳತಿ **

ಕಣ್ಣು ನಿನ್ನದಾದರೆ,

ಕಣ್ಣೀರು ನನ್ನದಾಗಲಿ ಗೆಳತಿ!!


ತುಟಿ ನಿನ್ನದಾದರೆ,

ಮಾತು ನನ್ನದಾಗಲಿ ಗೆಳತಿ!!


ಹೃದಯ ನಿನ್ನದಾದರೆ,

ಬಡಿತ ನನ್ನದಾಗಲಿ ಗೆಳತಿ!!


ಬಡಿತಾನೆ ಇಲ್ಲದಿದ್ದರೆ,

ಈ ಜೀವ ಏಕೀ ಗೆಳತಿ!!


ನೆನಪಿನ ನಾವಿಕ!!!

** Nj ಗೌಡ **


ಹುಚ್ಚು ಪ್ರೀತಿಯ ಹುಡುಕಾಟ???


ಪ್ರೀತಿಂಬ ಮಾಯೆಯಲ್ಲಿ ಬಿದ್ದರೆ ಏಳುವುದು ಕಷ್ಟ,
ಆದರೆ ಜನರಿಗೆ ಇದೆ ಇಷ್ಟ....

ಬೇಡಪ್ಪ ಈ ಪ್ರೀತಿ,
ಸುಮ್ಮನೆ ಯಾಕೆ ಈ ಪಜೀತಿ....

ಕಾಸು ಇದ್ದರೆ ಬಾಸು,
ಇಲ್ಲಾಂದ್ರೆ ಬರೀ ಟೈಮ್ ಪಾಸು ....

ಭಾವನೆಗಳಿಗೆ ಬೆಲೆಯಿಲ್ಲದ ಹುಡುಗಿಯರ ನಡುವೆ,
ಪ್ರೀತಿ ಬಯಸೀ ಹೊರಟರೆ ನೀ ಅಳುವೇ ಕೊನೆಗೆ....

ಅಪ್ಪ, ಅಮ್ಮ, ಇಲ್ಲದ ಸಮಯದಲ್ಲಿ ಮನೆಗೇ ಕರೆಯುತಾರೆ,
ಮದುವೆಯ ವಿಷ್ಯ ಬಂದಾಗ ಕಾಗೆ ಹರಿಸುತಾರೆ....

ಒಮ್ಮೆ ಇದ್ದ ಹಾಗೆ ಮತೊಮ್ಮೆ ಇರುವುದಿಲ್ಲ,
ಬ್ರಹ್ಮನಿಂದಲೂ ಇವರನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ...

ಹುಚ್ಚು ಆಸೆಗಳ ಹಿಂದೆ ಸಾಗುವುದರ ಬದಲು,
Rush ಇರುವ BMTC ಬಸ್ ಹತ್ತಬಹುದೂ....


ನೆನಪಿನ ನಾವಿಕ!!!
** Nj ಗೌಡ **

ಎಲ್ಲೇ ಹೋದೆ ಮನವೇ?

ಜೀವನದಲ್ಲಿ ಮಾಡಿದ ತಪ್ಪಾದ್ರು ಯಾವುದು?
ನಿನ್ನನ್ನು ತುಂಬಾ ಪ್ರೀತಿಸಿದ್ದೋ ?
ಅಥವಾ

ಅವಳನ್ನು ಮತೊಮ್ಮೆ ತಿರಸ್ಕಾರ ಮಾಡಿದ್ದೋ?
ಇಲ್ಲಿ ನೀನು ಇಲ್ಲ, ಅವಳು ಇಲ್ಲ ,
ಮಾಡೋ ಕೆಲಸದಲಿ ಆಸಕ್ತಿ ಇಲ್ಲ ,ಕೊನೆಗೆ ಇಲ್ಲಿ ನನ್ನ ಜೀವಕೆ ಬೆಲೆ ಇಲ್ಲ ,

ಎಲ್ಲೇ ಹೋದೆ ಮನವೇ?

ನೀ ಹೇಳುವಷ್ಟು ಸುಲಭವಲ್ಲ
ನಿನ್ನ ಬಿಟ್ಟು ಬದುಕುವುದು,

ಬಿಚ್ಚಿಟ್ಟ ಭಾವನೆಗಳ ಎದರು ,
ಬೆಲೆ ಸಿಗದ ಜನಗಳ ನಡುವೆ ,
ಬಟ್ಟ ಬಯಲಿನ ಕತ್ತಲೆಯಲ್ಲಿ,
ಕಷ್ಟ ನಿಂದನೆಗಳ ನಡುವೆಯಲ್ಲಿ,
ನಗು ನಗುತಲೆ ನಾ ಬದುಕಿರುವೆ,

ಎಲ್ಲೇ ಹೋದೆ ಮನವೇ?

ತುಂಬಾ ಹತ್ತಿರ ಇದ್ದರು ನೋಡುವ ಹಾಗಿಲ್ಲ,
ಎದರು ಬಂದರು ಮುಕದಲ್ಲಿ
ಒಂದು ಸಣ್ಣ ನಗುವಿನ ಸುಳಿವಿಲ್ಲ ,

ಬೀಸುವ ತಂಗಾಳಿಯಲ್ಲಿ ತಂಪಿಲ್ಲ,
ಸೂರ್ಯನ ಬೆಳಕಿನಲ್ಲಿ ಹೊಳಪಿಲ್ಲ,
ಎಲ್ಲಿ ಹೋಯ್ತು,ಆ ನಿನ್ನ
ಕಣ್ಣ ಅಂಚಿನ ಸೊಬಗು,


ಎಲ್ಲೇ ಹೋದೆ ಮನವೇ?

ಹೋದ ದಾರಿಯಲಿ, ನಿಂತ ಜಾಗದಲ್ಲಿ,
ಕಾಡುತಿದೆ ನಿನ್ನ ನೆನಪು,
ಎಂಥ ಚಲುವೇ ಮುಂದೆ ಬಂದರೂ
ತಲೆ ತಗ್ಗಿಸುವ ಈ ನನ್ನ ಮನಸು,
ಒಂದು ಪುಟ್ಟ ಹೃದಯಕೆ 
ಇಷ್ಟೊಂದು ನೋವು ನೀಡಬೇಡ,


ಎಲ್ಲೇ ಹೋದೆ ಮನವೇ?




ನೆನಪಿನ ನಾವಿಕ!!!
** Nj ಗೌಡ **