Monday, 12 March 2012

ಹೆಣ್ಣಿರದ ಬದುಕು

ಹೆಣ್ಣಿರದ ಬದುಕು
ಸುಗಂಧವಿರದ ಪುಷ್ಪದಹಾಗೆ..
ನೀನೊಬ್ಬಳು ಮಾಯೆ
ತಾಯಿಯಾಗಿ ಮಮತೆಯನ್ನು,
ತಂಗಿಯಾಗಿ ವಾತ್ಸಲ್ಯವನ್ನು,
ಗೆಳತಿಯಾಗಿ ಸ್ನೇಹವನ್ನು,
ಮಡದಿಯಾಗಿ ಪ್ರೀತಿಯನ್ನು
ಬದುಕಿನ ಉದ್ದಕ್ಕೂ
ನಿನ್ನಯ ನೆರಳು…
"ಓ ಹೆಣ್ಣೆ" ನೀನಿಲ್ಲದೆ
ಹುಟ್ಟು ಸಾವುಗಲಿರಲ್ಲಿ
ಜಗದ ಇನ್ಯಾವ
ಕ್ರಿಯೆಗೂ ಅರ್ಥವಿಲ್ಲ,
ನೀತಾನೆ ಸೃಷ್ಟಿಯ ಮೂಲ...

ನೆನಪಿನ ನಾವಿಕ !!!

ನಿನ್ನಲ್ಲಿ ನಾನು !!!!

ಅಮ್ಮನ ಪ್ರೀತಿ
ನಿನ್ನಯ ಅಮಲು
ಎರಡು ತೇಲುತಿದ್ದೆ
ನೀರಿನ ಮೇಲಿನ
ಎಣ್ಣೆಯಹಾಗೆ...
ಮನಸಿನ ನೋವು
ಸ್ನೇಹಿತನ ಸಾವು
ಎಡಬಿಡದೆ ಕಾಡುತಿದ್ದೆ
ಕರಿ ನೆರಳಿನಹಾಗೆ...
ಜೀವಕ್ಕೆ ಜೀವ ನೀನು
ನಿನ್ನಯ ಪ್ರೀತಿಗೆ
ಮಾರುಹೋದೆ ನಾನು...
ಕೊಡಬೇಡ ಪೆಟ್ಟನ್ನು
ಈ ಪುಟ್ಟ ಹೃದಯಕ್ಕೆ
ಕಳೆದು ಕೊಂಡಿರುವ
ಪ್ರಪಂಚವನ್ನು ಕಾಣುತಿರುವೆ
ನಿನ್ನಲ್ಲಿ ನಾನು ನಿನ್ನಲ್ಲಿ ನಾನು....

***ನೆನಪಿನ ನಾವಿಕ***