Monday, 20 February 2012

ಛಾಯೆ!!

ನೋಡಬೇಡ ಕಾಡ್ಗಿಚ್ಚಂತೆ
ಇರುವ ಕಣ್ಣುಗಳಿಂದ,
ಹೋಗಬೇಡ ಮನಸ್ಸೆಂಬ
ಅರಮನೆಯಿಂದ,
ನೀ ಕೊಟ್ಟ ಪ್ರೀತಿ ತಿರುಗಿ
ಕೇಳಲು ಅದು ಸಾಲವಲ್ಲ,
ನೀ ಕೊಟ್ಟ ತುತ್ತು ಮತೊಮ್ಮೆ
ಅಮ್ಮನ ನೆನಪು ತಂದಿತಲ್ಲ
ಬೇಡ ಬೇಡ ಅಂದರು
ಪ್ರೀತಿಯಲ್ಲಿ ತಳ್ಳಿಬಿಟ್ಟೆ,
ದೂರ ದೂರ ಹೋದರು
ಮನಸಿನಲ್ಲಿ ಬಂದು ಕುಲಿತ್ತುಬಿಟ್ಟಿ,

ಹೂವಂತೆ ಇರುವ ಮನಸ್ಸನು
ಎಲೆ ಎಲೆ ಹಾಗೆ ಕಿತ್ತುಬಿಟ್ಟೆ,
ಕಪ್ಪು ಬಿಳ್ಪಂತೆ ಇರುವ ರಾತ್ರಿಗಳನ್ನು
ಕಾಮನಬಿಲ್ಲಂತೆ ಬದಲಿಸಿಬಿಟ್ಟಿ,
ಜೊತೆಯಲ್ಲಿ ಬರುತ್ತಿದ್ದ ನೆರಳನ್ನು
ಒಂಟಿಯಾಗಿ ಹಳಿಯುವಂತೆ ಮಾಡಿಬಿಟ್ಟೆ,

ನನಗಾಗಿ ನೀ ಹುಡುಕುತಿರುವೆ
ತಿಳಿದು ನಾನು ಕೊರಗುತ್ತಿರುವೆ,
ಜೊತೆಯಲ್ಲಿ ಇದ್ದ ಮಧುರ
ಕ್ಷಣಗಳನ್ನು ನೆನದು ಬಾಳುತ್ತಿರುವೆ,
ನೀನಿಲ್ಲದ ಪಟ್ಟ ವ್ಯಥೆಯನ್ನು
ನೆನದು ಮನಸ್ಸಿನಲ್ಲಿ ಸುಡುತ್ತಿರುವೆ,

ನೆನಪಿನ ನಾವಿಕ!!!